Tuesday, May 8, 2012

ಬಂಗಡೆ ಮೀನು ಪುಳಿ ಮುಂಚಿ ಪಧಾರ್ಥ

ಬೇಕಾಗುವ ಸಾಮಗ್ರಿಗಳು : 
ಬಂಗಡೆ ಮೀನು - 1/2 kg
ಈರುಳ್ಳಿ - 1
ಹಸಿಮೆಣಸು - 2 ರಿಂದ 3
ಶುಂಟಿ - 1 inch
ಬೇವಿನ ಸೊಪ್ಪು - 6 ರಿಂದ 8
ಉಪ್ಪು - ರುಚಿಗೆ ತಕ್ಕಷ್ಟು
ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - 1/4 cup
ಕೊತ್ತಂಬರಿ ಬೀಜ - 2 tsp
ಜೀರಿಗೆ - 1 /2 tsp
ಕಾಳು ಮೆಣಸು - 1/2 tsp (pepper)
ಮೆಂತ್ಯ ಕಾಳು - 1/4 tsp
ಬ್ಯಾಡಗಿ ಮೆಣಸು - 10 ರಿಂದ 15
ಅರಶಿನ ಪುಡಿ - 1/4 tsp
ಹುಣಸೆ ಹುಳಿ - ಬೇಕಾದಷ್ಟು
ಬೆಳ್ಳುಳ್ಳಿ - 1 ರಿಂದ 2 ಎಸಳು 

ಮಾಡುವ ವಿಧಾನ :
ಮೊದಲಿಗೆ ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿ ಇಡಿ .
ನಂತರ ಕೊತ್ತಂಬರಿ,ಜೀರಿಗೆ ,ಕಾಳು ಮೆಣಸು , ಮೆಂತ್ಯ ಕಾಳು ,ಬ್ಯಾಡಗಿ ಮೆಣಸು (ಇಷ್ಟನ್ನು ಒಟ್ಟಿಗೆ ಹುರಿದುಕೊಳ್ಳಿ),ತೆಂಗಿನಕಾಯಿ ತುರಿ ,ಅರಶಿನ ,ಹುಣಸೆ ಹುಳಿ ಮತ್ತೆ ಸ್ವಲ್ಪ ನೀರು ಎಲ್ಲವನ್ನು ಒಟ್ಟಿಗೆ ಹಾಕಿ ಮಿಕ್ಸಿಯಲ್ಲಿ ಕಡೆದುಕೊಳ್ಳಿ .
ನಂತರ ಅದಕ್ಕೆ 1 ಅಥವಾ  2  ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಮಾಡಿಟ್ಟ ಮಸಾಲವನ್ನು ಮೀನಿಗೆ ಹಾಕಿ ಈರುಳ್ಳಿ ,ಹಸಿಮೆಣಸು ,ಶುಂಟಿ ,ಬೇವಿನ ಸೊಪ್ಪು ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಬೆಂಕಿಯಲ್ಲಿ 20 ನಿಮಿಷ ಬೇಯಿಸಬೇಕು...
ಇದನ್ನು ಅನ್ನ ,ದೋಸೆ ಅಥವಾ ಇಡ್ಲಿ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.




 

No comments:

Post a Comment