ಹೆಸರು ಕಾಳು - 1/2 cup
ಈರುಳ್ಳಿ - 1
ಟೊಮೇಟೊ - 1
ಬೇವಿನ ಸೊಪ್ಪು - 4 - 5
ಉಪ್ಪು ರುಚಿಗೆ ತಕ್ಕಷ್ಟು
ನೀರು - 1 1/2 cup
ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ ,ಕೆಂಪು ಮೆಣಸು , ಕೊತ್ತಂಬರಿ ಬೀಜ ,ಜೀರಿಗೆ ,ಅರಶಿನ ಪುಡಿ,ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ಕಡೆದುಕೊಳ್ಳಿ.ನಂತರ ಅದಕ್ಕೆ 1 ಅಥವಾ 2 ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಮಾಡಿಟ್ಟ ಮಸಾಲವನ್ನು ಬೇಯೀಸಿಟ್ಟ ಹೆಸರು ಕಾಳಿಗೆ ಹಾಕಿ ಚೆನ್ನಾಗಿ ಕುದಿಸಿ.
ನಂತರ ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಸಾಸಿವೆ ,ಬೇವಿನ ಸೊಪ್ಪು , ಈರುಳ್ಳಿ ಕೆಂಪು ಆಗುವ ತನಕ ಹುರಿದುಕೊಳ್ಳಿ .ಮಾಡಿಟ್ಟ ಒಗ್ಗರಣೆಯನ್ನು ಕುದಿಯುವ ಮಸಾಲಕ್ಕೆ ಹಾಕಿ .
ಇದನ್ನು ಅನ್ನದ ಜೊತೆಗೆ ತಿಂದರೆ ರುಚಿಯಾಗಿರುತ್ತದೆ ..