ಬೇಕಾಗುವ ಸಾಮಗ್ರಿಗಳು :
ಅಕ್ಕಿ - 1 1/2 cup
ಮೆಂತೆ ಕಾಳು - 2 tsp
ತೆಂಗಿನಕಾಯಿ ತುರಿ - 1/2 cup
ಬೆಲ್ಲ - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಮೊದಲು ಅಕ್ಕಿ ಮತ್ತು ಮೆಂತೆ ಕಾಳನ್ನು( ಮೆಂತೆಯನ್ನು 6 ಗಂಟೆ ತನಕ ನೆನೆಸಬೇಕು ) ಬೇರೆ ಬೇರೆಯಾಗಿ ನೆನೆಸಿಟ್ಟುಕೊಳ್ಳಿ .
ಮೊದಲಿಗೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ತರಿತರಿಯಾಗಿ ರುಬ್ಬಬೇಕು .(ಸ್ವಲ್ಪ ಅಕ್ಕಿಯನ್ನು ತೆಗೆದು ಇಟ್ಟುಕೊಳ್ಳಿ ).
ನಂತರ ನೆನೆಸಿಟ್ಟುಕೊಂಡ ಅಕ್ಕಿ,ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು ನಂತರ ಅದಕ್ಕೆ ಮೆಂತೆ ಕಾಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಈ ಮಿಶ್ರಣಕ್ಕೆ ರುಚಿಗೆ ಬೇಕಾದಷ್ಟು ಬೆಲ್ಲವನ್ನು ಹಾಕಿ 1 ಅಥವಾ 2 ಸುತ್ತು ರುಬ್ಬಿಕೊಳ್ಳಿ .
ಮಾಡಿಟ್ಟುಕೊಂಡ ಹಿಟ್ಟನ್ನು ರಾತ್ರಿ ಹೊರಗಿಡಿ.ನಂತರ ಇಡ್ಲಿ ಬೇಯಿಸಿದ ಹಾಗೆ ಬೇಯಿಸಬೇಕು .
ಇದನ್ನು ತುಪ್ಪದ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ .......