ಸಿಗಡಿ (prawns) ಬಸಳೆ ಸೊಪ್ಪು ಪಧಾರ್ಥ
ಬೇಕಾಗುವ ಸಾಮಗ್ರಿಗಳು :
ಸಿಗಡಿ (prawns /shrimp) - 1 pound
ಬಸಳೆ ಸೊಪ್ಪು - 1 ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು
ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - ಸ್ವಲ್ಪ (ಬೇಕಾದರೆ)
ಕೊತ್ತಂಬರಿ ಬೀಜ - 2 tsp
ಜೀರಿಗೆ - 1 /2 tsp
ಕಾಳು ಮೆಣಸು - 1/2 tsp (pepper)
ಮೆಂತ್ಯ ಕಾಳು - 1/4 tsp
ಬ್ಯಾಡಗಿ ಮೆಣಸು - 10 ರಿಂದ 15
ಅರಶಿನ ಪುಡಿ - 1/4 tsp
ಹುಣಸೆ ಹುಳಿ - ಬೇಕಾದಷ್ಟು
ಬೆಳ್ಳುಳ್ಳಿ - 1 ರಿಂದ 2 ಎಸಳು
ಮಾಡುವ ವಿಧಾನ:
ಮೊದಲಿಗೆ ಸಿಗಡಿಯನ್ನು
ಚೆನ್ನಾಗಿ ತೊಳೆದುಕೊಳ್ಳಿ. ಬಸಳೆ ಸೊಪ್ಪನ್ನು ಸಹ ಚೆನ್ನಾಗಿ ತೊಳೆದು
ಸಣ್ಣದಾಗಿ ಕತ್ತರಿಸಿಕೊಳ್ಳಿ. ಸೊಪ್ಪಿನ ದಂಟನ್ನು ಕತ್ತರಿಸಿ ಸ್ವಲ್ಪ ಉಪ್ಪು ಹಾಕಿ
ಬೇಯಿಸಿಕೊಳ್ಳಬೇಕು (ಅರ್ಧ ಬೆಂದರೆ ಸಾಕು).
ನಂತರ ಕೊತ್ತಂಬರಿ, ಜೀರಿಗೆ, ಕಾಳು ಮೆಣಸು, ಮೆಂತ್ಯ ಕಾಳು, ಬ್ಯಾಡಗಿ ಮೆಣಸು - ಇಷ್ಟನ್ನು
ಒಟ್ಟಿಗೆ ಹುರಿದುಕೊಳ್ಳಿ. ತೆಂಗಿನಕಾಯಿ ತುರಿ, ಅರಶಿನ, ಹುಣಸೆ ಹುಳಿ ಮತ್ತೆ ಸ್ವಲ್ಪ
ನೀರು ಎಲ್ಲವನ್ನು ಒಟ್ಟಿಗೆ ಹಾಕಿ ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಿ. ನಂತರ ಅದಕ್ಕೆ 1 ಅಥವಾ 2 ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಬೇಯಿಸಿಟ್ಟುಕೊಂಡ ದಂಟಿಗೆ ಕಡಿದಿಟ್ಟ ಮಸಾಲೆ, ಬಸಳೆ ಸೊಪ್ಪು, ಸಿಗಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು.
ಇದನ್ನು ಕುಚ್ಚಲಕ್ಕಿ ಅನ್ನದ (parboiled rice) ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.
No comments:
Post a Comment