Thursday, June 9, 2011

ಹೆಸರು ಕಾಳು ಪಧಾರ್ಥ


ಬೇಕಾಗುವ ಸಾಮಗ್ರಿಗಳು :
ಹೆಸರು ಕಾಳು - 1/2  cup 
ಈರುಳ್ಳಿ - 1 
ಟೊಮೇಟೊ - 1 
ಬೇವಿನ ಸೊಪ್ಪು - 4  - 5 
ಉಪ್ಪು ರುಚಿಗೆ ತಕ್ಕಷ್ಟು
ನೀರು - 1 1/2  cup
ಮಸಾಲಕ್ಕೆ  ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - 1/3 cup 
ಕೆಂಪು ಮೆಣಸು - 6  - 7  ( ಹುರಿದುಕೊಳ್ಳಿ )
ಕೊತ್ತಂಬರಿ ಬೀಜ - 2  tsp  ( ಹುರಿದುಕೊಳ್ಳಿ )  
ಜೀರಿಗೆ - 1/2  tsp ( ಹುರಿದುಕೊಳ್ಳಿ )
ಅರಶಿನ ಹುಡಿ / ಪುಡಿ - 1/4  tsp 
ಬೆಳ್ಳುಳ್ಳಿ - 1 - 2 
ನೀರು ಸ್ವಲ್ಪ 
ಒಗ್ಗರಣೆಗೆ  ಬೇಕಾಗುವ ಸಾಮಗ್ರಿಗಳು : 
ಸಾಸಿವೆ - 1/4 tsp 
ಈರುಳ್ಳಿ -  1/2 ( ಸಣ್ಣಗೆ  ಕಟ್ ಮಾಡಿ )
ಬೇವಿನ ಸೊಪ್ಪು - 3 - 4 
ಎಣ್ಣೆ  - 1  tsp
ಮಾಡುವ ವಿಧಾನ : 
ಮೊದಲು ಒಂದು ಕುಕ್ಕರಲ್ಲಿ ಹೆಸರು ಕಾಳು , ಈರುಳ್ಳಿ ,ಟೊಮೇಟೊ , ಬೇವಿನ ಸೊಪ್ಪು ,  ನೀರು, ಉಪ್ಪು ರುಚಿಗೆ ತಕ್ಕಷ್ಟು ಹಾಕಿ 2 ಸೀಟಿ  (ವಿಸಿಲ್ ) ಬರುವವರೆಗೂ ಬೇಯಿಸಬೇಕು .
ನಂತರ  ತೆಂಗಿನಕಾಯಿ ತುರಿ ,ಕೆಂಪು ಮೆಣಸು , ಕೊತ್ತಂಬರಿ ಬೀಜ ,ಜೀರಿಗೆ ,ಅರಶಿನ ಪುಡಿ,ಸ್ವಲ್ಪ ನೀರು ಹಾಕಿ   ಮಿಕ್ಸಿಯಲ್ಲಿ  ಹಾಕಿ ಕಡೆದುಕೊಳ್ಳಿ.ನಂತರ ಅದಕ್ಕೆ 1 ಅಥವಾ  2  ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಮಾಡಿಟ್ಟ ಮಸಾಲವನ್ನು ಬೇಯೀಸಿಟ್ಟ ಹೆಸರು ಕಾಳಿಗೆ ಹಾಕಿ ಚೆನ್ನಾಗಿ ಕುದಿಸಿ. 
ನಂತರ  ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಸಾಸಿವೆ ,ಬೇವಿನ ಸೊಪ್ಪು , ಈರುಳ್ಳಿ  ಕೆಂಪು ಆಗುವ ತನಕ ಹುರಿದುಕೊಳ್ಳಿ .ಮಾಡಿಟ್ಟ ಒಗ್ಗರಣೆಯನ್ನು ಕುದಿಯುವ ಮಸಾಲಕ್ಕೆ ಹಾಕಿ .
ಇದನ್ನು ಅನ್ನದ ಜೊತೆಗೆ ತಿಂದರೆ ರುಚಿಯಾಗಿರುತ್ತದೆ ..













No comments:

Post a Comment