Friday, April 26, 2013

ಹೆಸರುಬೆಳೆ ಉಂಡೆ

ಬೇಕಾಗುವ ಸಾಮಗ್ರಿಗಳು :
ಹೆಸರುಬೆಳೆ - 1 cup 
ಸಕ್ಕರೆ - 1/2 cup 
ತುಪ್ಪ - 1/2 to 3/4 cup
ಕೊಬ್ಬರಿ ತುರಿ - 2  Tbsp 
ಒಣ ದ್ರಾಕ್ಷಿ - ಬೇಕಾದಷ್ಟು 
ಗೋಡಂಬಿ - ಬೇಕಾದಷ್ಟು 
ಏಲಕ್ಕಿ - ಸ್ವಲ್ಪ 

ಮಾಡುವ ವಿಧಾನ :
ಮೊದಲಿಗೆ ಹೆಸರುಬೆಳೆಯನ್ನು ಕೆಂಪಗೆ ಹುರಿದುಕೊಂಡು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ನಂತರ ಸಕ್ಕರೆಯನ್ನು ಪುಡಿಮಾಡಿಕೊಳ್ಳಿ . 
ಪುಡಿಮಾಡಿಟ್ಟುಕೊಂಡ ಹೆಸರುಬೆಳೆ , ಸಕ್ಕರೆ ಪುಡಿ ಮತ್ತು ಕೊಬ್ಬರಿ ತುರಿಯನ್ನು ಒಂದು ಪಾತ್ರೆಯಲ್ಲಿ ಒಟ್ಟಿಗೆ ಬೆರೆಸಿಟ್ಟುಕೊಳ್ಳಿ. 
ನಂತರ ಇನ್ನೊಂದು ಕವಲೆಯಲ್ಲಿ ಗೇರುಬೀಜ ಮತ್ತು ದ್ರಾಕ್ಷಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಟ್ಟು ಅದನ್ನು ಬೇರೆಸಿಟ್ಟ ಮಿಶ್ರಣಕ್ಕೆ ಹಾಕಿಕೊಳ್ಳಿ. 
ನಂತರ 3/4 cup ತುಪ್ಪವನ್ನು ಕರಗಿಸಿ ಅದನ್ನು ಮೇಲೆ ಬೇರೆಸಿಟ್ಟ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಂಡು ಉಂಡೆ ಮಾಡಬೇಕು . 



 

Friday, April 12, 2013

ಮಂಗಳೂರು ಬನ್ಸ್

ಬೇಕಾಗುವ ಸಾಮಗ್ರಿಗಳು :
ಮೈದಾ - 2 cups
ಬಾಳೆಹಣ್ಣು -1 ದೊಡ್ಡದು 
ಮೊಸರು - 4 - 5 Tbsp
ಸಕ್ಕರೆ - 4 -5 tsp 
ಬೇಕಿಂಗ್ ಸೋಡಾ - 1/2  tsp 
ಜೀರಿಗೆ - 1/2  tsp 
ಉಪ್ಪು - 1 ಚಿಟಿಕೆ 
ಎಣ್ಣೆ  ಕರಿಯಲು 

ಮಾಡುವ ವಿಧಾನ :
ಮೊದಲು ಬಾಳೆಹಣ್ಣನ್ನು ಕಿವುಚಬೇಕು. ಅದಕ್ಕೆ ಮೊಸರು, ಸಕ್ಕರೆ, ಉಪ್ಪು, ಬೇಕಿಂಗ್ ಸೋಡಾ, ಜೀರಿಗೆ ಹಾಕಿ ಚೆನ್ನಾಗಿ ಕಲಸಬೇಕು. ನಂತರ ಮೈದಾ ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಮಿಶ್ರಣ ಸರಿಯಾದ ಹದಕ್ಕೆ ಬರದೆ ಇದ್ದರೆ ಸ್ವಲ್ಪ ಮೈದಾ ಸೇರಿಸಿ ಕಲಸಿ. ಆರು ಗಂಟೆ ಮುಚ್ಚಿಡಿ (ರಾತ್ರಿ ಕಲಸಿ ಇಟ್ಟು ಬೆಳಗ್ಗೆ ಮಾಡಿ).   
ಚಪಾತಿಗೆ ಮಾಡುವಂತೆ ಉಂಡೆ ಮಾಡಿ ಮೈದಾ ಹಿಟ್ಟನ್ನು ಬಳಸಿ ಪೂರಿಯ ಗಾತ್ರಕ್ಕೆ ಲಟ್ಟಿಸಿ. ಬಿಸಿಯಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ. 



ಈರುಳ್ಳಿ ಬಜೆ

ಬೇಕಾಗುವ ಸಾಮಗ್ರಿಗಳು :
ಕಡಲೆ ಹಿಟ್ಟು - 1/2 cup 
ಈರುಳ್ಳಿ  - 1 ದೊಡ್ಡದು 
ಕೆಂಪುಮೆಣಸಿನ ಪುಡಿ - 1 tsp
ಇಂಗು - ಒಂದು ಚಿಟಿಕೆ 
ಉಪ್ಪು - ರುಚಿಗೆ ತಕ್ಕಷ್ಟು 
ನೀರು  - ಬೇಕಾದಷ್ಟು
ಎಣ್ಣೆ - ಕರಿಯಲು 

 ಮಾಡುವ ವಿಧಾನ : 
ಮೊದಲಿಗೆ  ಕಡಲೆ ಹಿಟ್ಟು , ಕೆಂಪು ಮೆಣಸಿನ ಪುಡಿ  , ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು ಅದಕ್ಕೆ ನೀರು  ಹಾಕಿ ಕಲಸಿಕೊಳ್ಳಬೇಕು  (ದೋಸೆ ಹಿಟ್ಟಿನ ಹದಕ್ಕೆ ಕಲಸಿ).ನಂತರ ಈರುಳ್ಳಿಯನ್ನು ಉದ್ದವಾಗಿ ಹೆಚ್ಚಿಕೊಳ್ಳಿ .ನಂತರ ಕಲಸಿಟ್ಟ ಕಡಲೆಹಿಟ್ಟು ಮಿಶ್ರಣಕ್ಕೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಎಣ್ಣೆಯಲ್ಲಿ ಕರಿಯಲು ಬಿಡಿ .ಅದು ಕಂದು ಬಣ್ಣ ಬರುವವರೆಗು ಕರಿಯರಿ.
ಇದನ್ನು ಟೊಮೇಟೊ ಕೆಚಪ್ ( tomato ketchup ) ಜೊತೆ ತಿಂದರೆ ರುಚಿಯಾಗಿರುತ್ತದೆ.  


  

ಚಕ್ಕುಲಿ

ಬೇಕಾಗುವ ಸಾಮಗ್ರಿಗಳು :
ಅಕ್ಕಿ  - 2 cup ( ಸೋನ ಮಸುರಿ )
ಉದ್ದಿನ ಬೇಳೆ - 1 cup 
ಜೀರಿಗೆ - 1/2 tsp 
ಎಳ್ಳು - 1/2 tsp 
ಬೆಣ್ಣೆ  - 3 ರಿಂದ 4 tsp 
ಉಪ್ಪು - ರುಚಿಗೆ ತಕ್ಕಷ್ಟು 
ಎಣ್ಣೆ - ಕರಿಯಲು 

ಮಾಡುವ ವಿಧಾನ :
ಅಕ್ಕಿಯನ್ನು 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು .
ಉದ್ದಿನ ಬೆಳೆಯನ್ನು ಪರಿಮಳ ಬರುವ ತನಕ ಹುರಿದುಕೊಳ್ಳಬೇಕು.ನಂತರ ಅದು ಆರಿದ ಮೇಲೆ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು 
ನೆನೆಸಿಟ್ಟ  ಅಕ್ಕಿಯನ್ನು  ಸ್ವಲ್ಪ ನೀರು ಹಾಕಿ ಚೆನ್ನಾಗಿ ನಯವಾಗುವವರೆಗೂ ರುಬ್ಬಿಕೊಳ್ಳಬೇಕು .
ನಂತರ  ರುಬ್ಬಿ ಇಟ್ಟುಕೊಂಡ ಅಕ್ಕಿಗೆ ಬೆಣ್ಣೆ , ಜೀರಿಗೆ , ಎಳ್ಳು , ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕಲಸಿ ,ನಂತರ ಪುಡಿಮಾಡಿ ಇಟ್ಟುಕೊಂಡ ಉದ್ದಿನ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕಲಸಿರಿ .( ಬೇಕಾದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು  ) 
ಕಲಸಿಟ್ಟ ಮಿಶ್ರಣವನ್ನು 20 ರಿಂದ 30 ನಿಮಿಷ ಇಟ್ಟಿರಬೇಕು .
ನಂತರ 1 ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ ,ಕಲಸಿಟ್ಟ  ಮಿಶ್ರಣವನ್ನು ಚಕ್ಕುಲಿ ಮಾಡುವ ಅಚ್ಚಿಗೆ ಹಾಕಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಈಗ ರುಚಿರುಚಿಯಾದ ಚಕ್ಕುಲಿ ಸವಿಯಲು ಸಿದ್ದ  

ಮೆಂತೆ ಇಡ್ಲಿ

ಬೇಕಾಗುವ ಸಾಮಗ್ರಿಗಳು :
ಅಕ್ಕಿ - 1 1/2 cup                                                     
ಮೆಂತೆ ಕಾಳು   - 2 tsp 
ತೆಂಗಿನಕಾಯಿ ತುರಿ - 1/2 cup 
ಬೆಲ್ಲ - ರುಚಿಗೆ  ತಕ್ಕಷ್ಟು 
ಉಪ್ಪು - ರುಚಿಗೆ ತಕ್ಕಷ್ಟು 

ಮಾಡುವ ವಿಧಾನ :
ಮೊದಲು ಅಕ್ಕಿ ಮತ್ತು ಮೆಂತೆ  ಕಾಳನ್ನು( ಮೆಂತೆಯನ್ನು 6 ಗಂಟೆ ತನಕ ನೆನೆಸಬೇಕು ) ಬೇರೆ ಬೇರೆಯಾಗಿ ನೆನೆಸಿಟ್ಟುಕೊಳ್ಳಿ .
ಮೊದಲಿಗೆ  ನೆನೆಸಿಟ್ಟುಕೊಂಡ ಅಕ್ಕಿಯನ್ನು ತರಿತರಿಯಾಗಿ ರುಬ್ಬಬೇಕು .(ಸ್ವಲ್ಪ ಅಕ್ಕಿಯನ್ನು ತೆಗೆದು ಇಟ್ಟುಕೊಳ್ಳಿ ).
ನಂತರ  ನೆನೆಸಿಟ್ಟುಕೊಂಡ  ಅಕ್ಕಿ,ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು ನಂತರ ಅದಕ್ಕೆ ಮೆಂತೆ ಕಾಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಈ ಮಿಶ್ರಣಕ್ಕೆ ರುಚಿಗೆ ಬೇಕಾದಷ್ಟು ಬೆಲ್ಲವನ್ನು ಹಾಕಿ 1 ಅಥವಾ 2 ಸುತ್ತು ರುಬ್ಬಿಕೊಳ್ಳಿ .
ಮಾಡಿಟ್ಟುಕೊಂಡ ಹಿಟ್ಟನ್ನು ರಾತ್ರಿ ಹೊರಗಿಡಿ.ನಂತರ ಇಡ್ಲಿ ಬೇಯಿಸಿದ ಹಾಗೆ ಬೇಯಿಸಬೇಕು .
ಇದನ್ನು ತುಪ್ಪದ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ .......

 
 

Wednesday, January 16, 2013

ಚಿಕನ್ ಗ್ಹೀ ರೋಸ್ಟ್

ಬೇಕಾಗುವ ಸಾಮಗ್ರಿಗಳು : 
ಕೋಳಿ  - 2  ರಿಂದ 3 ಪೌಂಡ್ಸ್ 
ಬ್ಯಾಡಗಿ ಮೆಣಸು - 15  ರಿಂದ 25 
ಬೆಳ್ಳುಳ್ಳಿ - 1  1 /2 ಗಡ್ಡೆ
ಜೀರಿಗೆ - 1 tbsp 
ಲಿಂಬೆ ಹಣ್ಣಿನ ರಸ - 1 tbsp
ತುಪ್ಪ - 4 ರಿಂದ 5 tbsp  
ಉಪ್ಪು ರುಚಿಗೆ ತಕ್ಕಷ್ಟು 

ಮಾಡುವ ವಿಧಾನ :
ಮೊದಲು ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆಯಬೇಕು .
ನಂತರ ಮೆಣಸು ,ಜೀರಿಗೆ ,ಬೆಳ್ಳುಳ್ಳಿಯನ್ನು ಹಸಿಯಾಗಿ ಬೇಯಿಸಿಕೊಳ್ಳಬೇಕು.ತಣ್ಣಗೆ ಅದ ನಂತರ ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು .
ರುಬ್ಬಿದ ಮಸಾಲೆಯಲ್ಲಿ ಕಾಲು ಅಂಶ ಮಸಾಲವನ್ನು ಕೋಳಿಗೆ  ಹಾಕಿ ಉಪ್ಪು , ಲಿಂಬೆ ಹಣ್ಣಿನ ರಸ ಹಾಕಿ
ಮುಕ್ಕಾಲು ಅಂಶ ಬೇಯಿಸಿಕೊಳ್ಳಬೇಕು .

ಒಂದು ಬಾಣಲೆಗೆ ತುಪ್ಪ ಹಾಕಿ ಉಳಿದ ಮಸಾಲವನ್ನು ಹಾಕಿ ಕಾಯಿಸಬೇಕು .ಅರ್ಧ ಕಾದ ನಂತರ ಬೇಯಿಸಿಟ್ಟ ಕೋಳಿಯನ್ನು ಹಾಕಿ ಫ್ರೈ ಮಾಡಬೇಕು .
ಮಸಾಲೆಯಲ್ಲಿ  ತುಪ್ಪ ಬಿಡುತ್ತ ಬರುತ್ತದೆ .ಸ್ವಲ್ಪ ರೋಸ್ಟ್ ಆದಮೇಲೆ ಗ್ಯಾಸ್ ಬಂದು ಮಾಡಿದರೆ ಆಯಿತು...
ಈಗ ರುಚಿ ರುಚಿಯಾದ ಚಿಕನ್ ಗ್ಹೀ ರೋಸ್ಟ್ ಸವಿಯಲು ಸಿದ್ದ .
  

Wednesday, May 16, 2012

ಸಿಗಡಿ (prawns) ಬಸಳೆ ಸೊಪ್ಪು ಪಧಾರ್ಥ


ಬೇಕಾಗುವ ಸಾಮಗ್ರಿಗಳು : 
ಸಿಗಡಿ (prawns /shrimp) - 1 pound
ಬಸಳೆ ಸೊಪ್ಪು - 1 ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು
ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - ಸ್ವಲ್ಪ (ಬೇಕಾದರೆ)
ಕೊತ್ತಂಬರಿ ಬೀಜ - 2 tsp
ಜೀರಿಗೆ - 1 /2 tsp
ಕಾಳು ಮೆಣಸು - 1/2 tsp (pepper)
ಮೆಂತ್ಯ ಕಾಳು - 1/4 tsp
ಬ್ಯಾಡಗಿ ಮೆಣಸು - 10 ರಿಂದ 15
ಅರಶಿನ ಪುಡಿ - 1/4 tsp
ಹುಣಸೆ ಹುಳಿ - ಬೇಕಾದಷ್ಟು
ಬೆಳ್ಳುಳ್ಳಿ - 1 ರಿಂದ 2 ಎಸಳು  


ಮಾಡುವ ವಿಧಾನ: 
ಮೊದಲಿಗೆ  ಸಿಗಡಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಬಸಳೆ ಸೊಪ್ಪನ್ನು ಸಹ ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ಸೊಪ್ಪಿನ ದಂಟನ್ನು ಕತ್ತರಿಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು (ಅರ್ಧ ಬೆಂದರೆ ಸಾಕು).
ನಂತರ 
ಕೊತ್ತಂಬರಿ, ಜೀರಿಗೆ, ಕಾಳು ಮೆಣಸು, ಮೆಂತ್ಯ ಕಾಳು, ಬ್ಯಾಡಗಿ ಮೆಣಸು - ಇಷ್ಟನ್ನು ಒಟ್ಟಿಗೆ ಹುರಿದುಕೊಳ್ಳಿ. ತೆಂಗಿನಕಾಯಿ ತುರಿ, ಅರಶಿನ, ಹುಣಸೆ ಹುಳಿ ಮತ್ತೆ ಸ್ವಲ್ಪ ನೀರು ಎಲ್ಲವನ್ನು ಒಟ್ಟಿಗೆ ಹಾಕಿ ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಿ. ನಂತರ ಅದಕ್ಕೆ 1 ಅಥವಾ 2 ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
 ನಂತರ ಬೇಯಿಸಿಟ್ಟುಕೊಂಡ ದಂಟಿಗೆ ಕಡಿದಿಟ್ಟ ಮಸಾಲೆ, ಬಸಳೆ ಸೊಪ್ಪು, ಸಿಗಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು.
ಇದನ್ನು ಕುಚ್ಚಲಕ್ಕಿ ಅನ್ನದ
(parboiled rice) ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.