Tuesday, May 8, 2012

ಬಂಗಡೆ ಮೀನು ಪುಳಿ ಮುಂಚಿ ಪಧಾರ್ಥ

ಬೇಕಾಗುವ ಸಾಮಗ್ರಿಗಳು : 
ಬಂಗಡೆ ಮೀನು - 1/2 kg
ಈರುಳ್ಳಿ - 1
ಹಸಿಮೆಣಸು - 2 ರಿಂದ 3
ಶುಂಟಿ - 1 inch
ಬೇವಿನ ಸೊಪ್ಪು - 6 ರಿಂದ 8
ಉಪ್ಪು - ರುಚಿಗೆ ತಕ್ಕಷ್ಟು
ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - 1/4 cup
ಕೊತ್ತಂಬರಿ ಬೀಜ - 2 tsp
ಜೀರಿಗೆ - 1 /2 tsp
ಕಾಳು ಮೆಣಸು - 1/2 tsp (pepper)
ಮೆಂತ್ಯ ಕಾಳು - 1/4 tsp
ಬ್ಯಾಡಗಿ ಮೆಣಸು - 10 ರಿಂದ 15
ಅರಶಿನ ಪುಡಿ - 1/4 tsp
ಹುಣಸೆ ಹುಳಿ - ಬೇಕಾದಷ್ಟು
ಬೆಳ್ಳುಳ್ಳಿ - 1 ರಿಂದ 2 ಎಸಳು 

ಮಾಡುವ ವಿಧಾನ :
ಮೊದಲಿಗೆ ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿ ಇಡಿ .
ನಂತರ ಕೊತ್ತಂಬರಿ,ಜೀರಿಗೆ ,ಕಾಳು ಮೆಣಸು , ಮೆಂತ್ಯ ಕಾಳು ,ಬ್ಯಾಡಗಿ ಮೆಣಸು (ಇಷ್ಟನ್ನು ಒಟ್ಟಿಗೆ ಹುರಿದುಕೊಳ್ಳಿ),ತೆಂಗಿನಕಾಯಿ ತುರಿ ,ಅರಶಿನ ,ಹುಣಸೆ ಹುಳಿ ಮತ್ತೆ ಸ್ವಲ್ಪ ನೀರು ಎಲ್ಲವನ್ನು ಒಟ್ಟಿಗೆ ಹಾಕಿ ಮಿಕ್ಸಿಯಲ್ಲಿ ಕಡೆದುಕೊಳ್ಳಿ .
ನಂತರ ಅದಕ್ಕೆ 1 ಅಥವಾ  2  ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಮಾಡಿಟ್ಟ ಮಸಾಲವನ್ನು ಮೀನಿಗೆ ಹಾಕಿ ಈರುಳ್ಳಿ ,ಹಸಿಮೆಣಸು ,ಶುಂಟಿ ,ಬೇವಿನ ಸೊಪ್ಪು ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಬೆಂಕಿಯಲ್ಲಿ 20 ನಿಮಿಷ ಬೇಯಿಸಬೇಕು...
ಇದನ್ನು ಅನ್ನ ,ದೋಸೆ ಅಥವಾ ಇಡ್ಲಿ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.




 

Thursday, June 9, 2011

ಹೆಸರು ಕಾಳು ಪಧಾರ್ಥ


ಬೇಕಾಗುವ ಸಾಮಗ್ರಿಗಳು :
ಹೆಸರು ಕಾಳು - 1/2  cup 
ಈರುಳ್ಳಿ - 1 
ಟೊಮೇಟೊ - 1 
ಬೇವಿನ ಸೊಪ್ಪು - 4  - 5 
ಉಪ್ಪು ರುಚಿಗೆ ತಕ್ಕಷ್ಟು
ನೀರು - 1 1/2  cup
ಮಸಾಲಕ್ಕೆ  ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿ ತುರಿ - 1/3 cup 
ಕೆಂಪು ಮೆಣಸು - 6  - 7  ( ಹುರಿದುಕೊಳ್ಳಿ )
ಕೊತ್ತಂಬರಿ ಬೀಜ - 2  tsp  ( ಹುರಿದುಕೊಳ್ಳಿ )  
ಜೀರಿಗೆ - 1/2  tsp ( ಹುರಿದುಕೊಳ್ಳಿ )
ಅರಶಿನ ಹುಡಿ / ಪುಡಿ - 1/4  tsp 
ಬೆಳ್ಳುಳ್ಳಿ - 1 - 2 
ನೀರು ಸ್ವಲ್ಪ 
ಒಗ್ಗರಣೆಗೆ  ಬೇಕಾಗುವ ಸಾಮಗ್ರಿಗಳು : 
ಸಾಸಿವೆ - 1/4 tsp 
ಈರುಳ್ಳಿ -  1/2 ( ಸಣ್ಣಗೆ  ಕಟ್ ಮಾಡಿ )
ಬೇವಿನ ಸೊಪ್ಪು - 3 - 4 
ಎಣ್ಣೆ  - 1  tsp
ಮಾಡುವ ವಿಧಾನ : 
ಮೊದಲು ಒಂದು ಕುಕ್ಕರಲ್ಲಿ ಹೆಸರು ಕಾಳು , ಈರುಳ್ಳಿ ,ಟೊಮೇಟೊ , ಬೇವಿನ ಸೊಪ್ಪು ,  ನೀರು, ಉಪ್ಪು ರುಚಿಗೆ ತಕ್ಕಷ್ಟು ಹಾಕಿ 2 ಸೀಟಿ  (ವಿಸಿಲ್ ) ಬರುವವರೆಗೂ ಬೇಯಿಸಬೇಕು .
ನಂತರ  ತೆಂಗಿನಕಾಯಿ ತುರಿ ,ಕೆಂಪು ಮೆಣಸು , ಕೊತ್ತಂಬರಿ ಬೀಜ ,ಜೀರಿಗೆ ,ಅರಶಿನ ಪುಡಿ,ಸ್ವಲ್ಪ ನೀರು ಹಾಕಿ   ಮಿಕ್ಸಿಯಲ್ಲಿ  ಹಾಕಿ ಕಡೆದುಕೊಳ್ಳಿ.ನಂತರ ಅದಕ್ಕೆ 1 ಅಥವಾ  2  ಬೆಳ್ಳುಳ್ಳಿ ಹಾಕಿ ಒಂದು ಸುತ್ತು ತಿರುಗಿಸಿ.
ನಂತರ ಮಾಡಿಟ್ಟ ಮಸಾಲವನ್ನು ಬೇಯೀಸಿಟ್ಟ ಹೆಸರು ಕಾಳಿಗೆ ಹಾಕಿ ಚೆನ್ನಾಗಿ ಕುದಿಸಿ. 
ನಂತರ  ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಸಾಸಿವೆ ,ಬೇವಿನ ಸೊಪ್ಪು , ಈರುಳ್ಳಿ  ಕೆಂಪು ಆಗುವ ತನಕ ಹುರಿದುಕೊಳ್ಳಿ .ಮಾಡಿಟ್ಟ ಒಗ್ಗರಣೆಯನ್ನು ಕುದಿಯುವ ಮಸಾಲಕ್ಕೆ ಹಾಕಿ .
ಇದನ್ನು ಅನ್ನದ ಜೊತೆಗೆ ತಿಂದರೆ ರುಚಿಯಾಗಿರುತ್ತದೆ ..













Friday, June 3, 2011

ಕುಂಬಳ ಕಾಯಿ ಹಲ್ವಾ

 ಬೇಕಾಗುವ ಸಾಮಗ್ರಿಗಳು :
ಕುಂಬಳ ಕಾಯಿ - 2  pounds (1 Kg)
ಸಕ್ಕರೆ - 2 cups  
ಏಲಕ್ಕಿ ಪುಡಿ /ಹುಡಿ  - 1 /2 -1 tsp 
ತುಪ್ಪ - 4 -5  Tbsp
ಗೋಡಂಬಿ /ಗೇರು ಬೀಜ - 1 -2 tsp 
ಒಣ ದ್ರಾಕ್ಷಿ- 1 tsp 


ಮಾಡುವ ವಿಧಾನ :
ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದು ,ಮತ್ತೆ ಅದನ್ನು ತುರಿಯಬೇಕು .
ನಂತರ ತುರಿದಿಟ್ಟ ಕುಂಬಳ ಕಾಯಿಯನ್ನು  ಒಂದು ಬಾಣಲೆಗೆ ಹಾಕಿ ಅದರ ನೀರು ಅವಿ/ಬತ್ತಿ ಹೋಗುವವರೆಗೂ ಕಾಯಿಸಬೇಕು.
ಮತ್ತೆ ಅದಕ್ಕೆ ತುಪ್ಪ, ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸಬೇಕು (ಸ್ವಲ್ಪ ಬ್ರೌನಿಶ್ /ಕಂದು ಬಣ್ಣ). ನಂತರ  ಏಲಕ್ಕಿ ಪುಡಿಯನ್ನು ಹಾಕಬೇಕು.
ಮತ್ತೊಂದು ಕಡೆಯಲ್ಲಿ  ಒಣ ದ್ರಾಕ್ಷಿ , ಗೋಡಂಬಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಹಾಕಬೇಕು .
ನಂತರ ಒಂದು ಬೌಲ್ ಗೆ ಹಾಕಿ ಇಡಬೇಕು . 
ಇದನ್ನು ತಣ್ಣಗೆ ಅದ ಮೇಲೆ ತಿಂದರೆ ರುಚಿ ರುಚಿ  ಆಗಿರುತ್ತದೆ.