Friday, April 12, 2013

ಚಕ್ಕುಲಿ

ಬೇಕಾಗುವ ಸಾಮಗ್ರಿಗಳು :
ಅಕ್ಕಿ  - 2 cup ( ಸೋನ ಮಸುರಿ )
ಉದ್ದಿನ ಬೇಳೆ - 1 cup 
ಜೀರಿಗೆ - 1/2 tsp 
ಎಳ್ಳು - 1/2 tsp 
ಬೆಣ್ಣೆ  - 3 ರಿಂದ 4 tsp 
ಉಪ್ಪು - ರುಚಿಗೆ ತಕ್ಕಷ್ಟು 
ಎಣ್ಣೆ - ಕರಿಯಲು 

ಮಾಡುವ ವಿಧಾನ :
ಅಕ್ಕಿಯನ್ನು 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು .
ಉದ್ದಿನ ಬೆಳೆಯನ್ನು ಪರಿಮಳ ಬರುವ ತನಕ ಹುರಿದುಕೊಳ್ಳಬೇಕು.ನಂತರ ಅದು ಆರಿದ ಮೇಲೆ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು 
ನೆನೆಸಿಟ್ಟ  ಅಕ್ಕಿಯನ್ನು  ಸ್ವಲ್ಪ ನೀರು ಹಾಕಿ ಚೆನ್ನಾಗಿ ನಯವಾಗುವವರೆಗೂ ರುಬ್ಬಿಕೊಳ್ಳಬೇಕು .
ನಂತರ  ರುಬ್ಬಿ ಇಟ್ಟುಕೊಂಡ ಅಕ್ಕಿಗೆ ಬೆಣ್ಣೆ , ಜೀರಿಗೆ , ಎಳ್ಳು , ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕಲಸಿ ,ನಂತರ ಪುಡಿಮಾಡಿ ಇಟ್ಟುಕೊಂಡ ಉದ್ದಿನ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕಲಸಿರಿ .( ಬೇಕಾದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು  ) 
ಕಲಸಿಟ್ಟ ಮಿಶ್ರಣವನ್ನು 20 ರಿಂದ 30 ನಿಮಿಷ ಇಟ್ಟಿರಬೇಕು .
ನಂತರ 1 ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ ,ಕಲಸಿಟ್ಟ  ಮಿಶ್ರಣವನ್ನು ಚಕ್ಕುಲಿ ಮಾಡುವ ಅಚ್ಚಿಗೆ ಹಾಕಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಈಗ ರುಚಿರುಚಿಯಾದ ಚಕ್ಕುಲಿ ಸವಿಯಲು ಸಿದ್ದ  

2 comments: